ಬೆಂಗಳೂರು, ಎ.17: ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರಗಳ ನಡುವಿನ ಅಂತರ ಮಾಯ ವಾಗುತ್ತಿದೆ ಎಂದು ಜರ್ಮನಿಯ ವೂರ್ಜ್‌ಬರ್ಗ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎ.ವಿವೇಕ ರೈ ಅಭಿಪ್ರಯಪಟ್ಟಿದ್ದಾರೆ.
ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿಂದು ಅಂಕಿತ ಪ್ರಕಾಶನದ ವತಿಯಿಂದ ಹಮ್ಮಿಕೊಳ್ಳ ಲಾಗಿದ್ದ ಕಾರ್ಯಕ್ರಮದಲ್ಲಿ ಜೋಗಿ ಅವರ ಕಾದಂಬರಿ ‘ಉರ್ಮಿಳಾ’ ಮತ್ತು ಪತ್ರಕರ್ತ ಜಿ.ಎನ್.ಮೋಹನ್‌ರ ಆತ್ಮಕಥನ ಸ್ವರೂಪದ ಬರಹ ‘ಡೋರ್ ನಂ.142’ ಹಾಗೂ ಅಂಕಣ ಬರಹ ‘ಮೀಡಿಯಾ ಮಿರ್ಚಿ’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಇಂದು ಎಂ.ಎ.ಪತ್ರಿಕೋದ್ಯಮ ಓದಿ ಮಾಧ್ಯಮ ಕ್ಷೇತ್ರಕ್ಕೆ ಬರುವ ವಿದ್ಯಾರ್ಥಿಗಳೆಲ್ಲರೂ ಸಾಹಿತ್ಯದ ಬಗ್ಗೆ ಆಳವಾಗಿ ತಿಳಿದುಕೊಂಡಿರುತ್ತಾರೆ ಮತ್ತು ಆಗಾಗ ಲೇಖನ, ಕಥೆ, ಕವಿತೆ ಗಳನ್ನು ಬರೆದು ತಮ್ಮದೆ ಬ್ಲಾಗ್‌ಗಳಲ್ಲಿ ಪ್ರಕಟಿಸುವ ಹವ್ಯಾಸವನ್ನು ಹೊಂದಿ ದ್ದಾರೆ. ಅದೇ ರೀತಿಯಲ್ಲಿ ನಾಡಿನ ಸಾಹಿತಿಗಳು ಕೂಡ ಮಡಿ ಮೈಲಿಗೆ ಯನ್ನು ಬಿಟ್ಟು ಪತ್ರಿಕೆಗಳಿಗೆ ಪ್ರಚಲಿತ ವಿದ್ಯಮಾನಗಳ ಕುರಿತು, ಅಂಕಣ, ಲೇಖನ, ವಿಡಂಬಣೆ ಮುಂತಾದವು ಗಳನ್ನು ಬರೆಯುವ ಮೂಲಕ ಮಾಧ್ಯಮಗಳೊಂದಿಗೆ ನಿರಂತರ ಸಂಬಂಧ ಹೊಂದಿದ್ದಾರೆ. ಇದು ಸಾಹಿತ್ಯ ಮತ್ತು ಮಾಧ್ಯಮ ಎರಡು ಕ್ಷೇತ್ರಕ್ಕೂ ಒಳ್ಳೆಯ ಬೆಳವಣಿಗೆ ಎಂದು ಅವರು ಹೇಳಿದರು.
ಇಂದಿನ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡುವ ಬಹುತೇಕ ಪತ್ರಕರ್ತರು ಬರೆಯುವ ರೂಢಿಯನ್ನು ಇಟ್ಟು ಕೊಂಡಿದ್ದಾರೆ. ಬ್ಲಾಗ್‌ಗಳು ಅವರಿಗೆ ಬರೆಯಲು ವಿಫುಲ ಅವಕಾಶ ನೀಡಿವೆ. ಬರೆಯುವುದನ್ನೆ ಮುಖ್ಯ ಕಸುಬನ್ನಾಗಿ ಮಾಡಿಕೊಳ್ಳುವ ಪತ್ರಕರ್ತರಿಗೆ ಬರವಣಿಗೆ ಒಳ್ಳೆಯ ಹವ್ಯಾಸ. ಬರವಣಿಗೆ ಪತ್ರಕರ್ತರಿಗೆ ಆತ್ಮ ವಿಶ್ವಾಸವನ್ನು ತುಂಬುತ್ತದೆ. ಇಂದು ಬಿಡುಗಡೆಯಾಗುತ್ತಿರುವ ಪುಸ್ತಕಗಳ ಲೇಖಕರಾದ ಜೋಗಿ ಮತ್ತು ಜಿ.ಎನ್.ಮೋಹನ್ ಈ ಮೊದಲು ಪತ್ರಕರ್ತರಾಗಿ ಯಶಸ್ಸು ಸಾಧಿಸಿದ ವರು. ಕೃತಿಗಳ ಕುರಿತು ಮಾತನಾಡಲು ಬಂದಿರುವ ಬಿ.ಸುರೇಶ್ ಮತ್ತು ನಾಗೇಶ್ ಹೆಗಡೆ ಕೂಡ ಮಾಧ್ಯಮ ಕ್ಷೇತ್ರದಿಂದಲೆ ಬಂದವರು. ಹೀಗಾಗಿ ಇಂದು ಬಿಡುಗಡೆಯಾಗುತ್ತಿರುವ ಪುಸ್ತಕಗಳು ಪತ್ರಕರ್ತರಿಗೆ ಮತ್ತು ಸಾಹಿತಿ ಮಿತ್ರರಿಗೆ ಉಪಯುಕ್ತವಾಗಿವೆ ಎಂದು ಅವರು ಹೇಳಿದರು.
ಇಂದು ಇಡಿ ಭಾರತದಲ್ಲಿಯೆ ಕರ್ನಾಟಕದ ರಾಜಧಾನಿ ಬೆಂಗಳೂರಿ ನಲ್ಲಿ ಹೆಚ್ಚು ಸಂಖ್ಯೆಯ ಪುಸ್ತಕಗಳು ಬಿಡುಗಡೆಯಾಗುತ್ತಿವೆ ಮತ್ತು ಅಷ್ಟೆ ಗುಣಮಟ್ಟದಿಂದ ಕೂಡಿದ್ದು, ಕನ್ನಡದ ಲೇಖಕರು ಪ್ರಪಂಚಾದ್ಯಂತ ಓದುಗ ರನ್ನು ಹೊಂದಿದ್ದಾರೆ. ಇದು ಕನ್ನಡಿಗರಿಗೆ ಸಂಭ್ರಮದ ವಿಚಾರ ಎಂದರು.
ಜಿ.ಎನ್.ಮೋಹನ್‌ರವರ ಎರಡು ಕೃತಿಗಳು ಕೂಡ ಆತ್ಮಾವ ಲೋಕನ ಮಾಡಿಕೊಳ್ಳುವ ನೆಲೆಯಲ್ಲಿ ಬರೆದವುಗಳಾಗಿವೆ. ಹಲವಾರು ದೇಶಗಳ ಸುತ್ತಾಟದ ವಿಷಯಗಳನ್ನು ಇವು ಹೊಂದಿರುವುದರಿಂದ ಇವುಗಳನ್ನು ಪ್ರವಾಸ ಕಥನಗಳೆಂದು ಕೂಡ ಕರೆಯಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೃತಿಗಳ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ, ಒಂದು ಕಾಲದಲ್ಲಿ ಅಪ್ಪಿತಪ್ಪಿಯೂ ತಮ್ಮ ಪತ್ರಿಕೆಯ ಹೆಸರನ್ನು ಬಿಟ್ಟು ಬೇರೆ ಪತ್ರಿಕೆಯ ಹೆಸರು ಬರದಂತೆ ಎಲ್ಲ ಪತ್ರಿಕೆಗಳ ಮುಖ್ಯಸ್ಥರು ಎಚ್ಚರಿಕೆ ವಹಿಸುತ್ತಿದ್ದರು. ಆದರೆ ಜಿ.ಎನ್. ಮೋಹನ್‌ರವರು ತಮ್ಮ ‘ಮೀಡಿಯಾ ಮಿರ್ಚಿ’ ಅಂಕಣ ಬರಹದಲ್ಲಿ ಎಲ್ಲ ಪತ್ರಿಕೆಗಳ ಹುಳುಕು- ಒಳಿತುಗಳನ್ನು ಬರೆಯುವುದರ ಜೊತೆಗೆ ಆಯಾ ಪತ್ರಿಕೆಯ ಮುಖ್ಯಸ್ಥರು ಆತ್ಮ ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದರು. ಪ್ರಸ್ತುತದಲ್ಲಿ ಪತ್ರಿಕಾರಂಗದ ಪಲ್ಲಟಗಳ ಕುರಿತು ಮನೋಜ್ಞವಾಗಿ ಮತ್ತು ಆಪ್ತವಾಗುವಂತೆ ಬರೆಯುತ್ತಿದ್ದರು ಎಂದು ಎಂದು ಶ್ಲಾಘಿಸಿದರು.
ಲೇಖಕರಾದ ಜೋಗಿ, ಜಿ.ಎನ್.ಮೋಹನ್ ಮತ್ತು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
'ಉದಯವಾಣಿ'ಯಲ್ಲಿ..
Affectionately,, HS Eswara
My dear Mohan,
I supremely enjoyed the program. Dr. Vivek Rai spoke affectionately and meaningfully. Since I had other commitments, I had to leave soon after Rai's speech. It was my pleasure seeing you being honoured in the function and listening good words spoken about your works. I was really moved when your mother received the first copy of your books, and what more does a loving mother need than to see the achievements of her son? Your book is dedicated to your mother--"Amma emba ayaskatakke"--what a beautiful expression of love and affection!
I have brought the books with me. I am a slow reader, and I read leisurely enjoying every word and sentence of what I read. When I finish my reading, I will pass on my comments, if I have any.
Thanks Mohan for making this Sunday morning worthwhile. My best wishes to Satya and blessings to Kinnari.
Affectionately, HS Eswara
‘ನಾನೂ ಮೊದಲ ಬುಕ್ ನಿಂಗೆ ಕೊಡ್ತೀನಿ’
ಚೇತನಾ ತೀರ್ಥಹಳ್ಳಿ ಫೇಸ್ ಬುಕ್ ನಲ್ಲಿ -
ಪುಸ್ತಕವನ್ನ ಹೇಗೆ ‘ಬಿಡುಗಡೆ’ ಮಾಡ್ತಾರೆ ಅಂತ ತಲೆಕೆಡಿಸ್ಕೊಂಡಿದ್ದ ಮಗನಿಗೆ ಇವತ್ತು ಕರಕೊಂಡು ಹೋಗಿ ತೋರಿಸಿದೆ. ಅವನ ನಿರೀಕ್ಷೆಯಂತೆ ಉದ್ದ ಕೂದಲನ್ನಾಗಲೀ ಇಳಿಗಡ್ಡವನ್ನಾಗಲೀ ಬಿಟ್ಟುಕೊಂಡಿರದಿದ್ದ ‘ಜೋಗಿ’ಯನ್ನ ನೋಡಿ ಅವಂಗೆ ನಿರಾಶೆ. ಮೋಹನ್ ಪುಸ್ತಕದ ಮೊದಲ ಕಾಪಿಯನ್ನ ಅಮ್ಮನಿಗೆ ಕೊಡಿಸಿದಾಗ ಅಂವ- ‘ನಾನೂ ಮೊದಲ ಬುಕ್ ನಿಂಗೆ ಕೊಡ್ತೀನಿ’ ಅಂದನಲ್ಲ... ಅದು ಇವತ್ತಿನ ಅತಿ ದೊಡ್ಡ ಖುಷಿ!
'ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ' ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ' . ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಆನ್ ಲೈನ್ ಮಾಧ್ಯಮದಲ್ಲಿನ ಅನೇಕ ಅನುಭವಗಳಿಗೆ ಒಡ್ಡಿಕೊಂಡ ಮೋಹನ್ ಅವರದು ನೋವಿನ ಮೂಲಕ ಸ್ಪಂದಿಸುವ ಬರವಣಿಗೆ. ಸನ್ನಿವೇಶಗಳನ್ನು ಸಹಜತೆಯೊಂದಿಗೆ ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತಾರೆ. ಸಣ್ಣಸಣ್ಣ ಘಟನೆಗಳನ್ನು ಇಟ್ಟಕೊಂಡು ವರ್ತಮಾನಕ್ಕೆ ಕೊಂಡಿ ನೀಡುತ್ತಾರೆ. ಅದು ಮೌಲ್ಯತ್ಮಕವಾಗಿ. ಇವರ ಲೇಖನಗಳು ಬಿಡಿಬಿಡಿಯಾಗಿ ಬರುತ್ತಿದ್ದಾಗಲೂ ಅದರಲ್ಲೊಂದು ಚೌಕಟ್ಟು ಗುರುತಿಸಬಹುದಾಗಿತ್ತು. ಈ ಕೃತಿ ಸಂವೇದನಾತ್ಮಕ. ಹೀಗೆಂದರು ಸಾಹಿತಿ ಬಿ ಎ ವಿವೇಕ ರೈ.
ನನ್ನ ಡೋರ್ ನಂ ೧೪೨ ಕೃತಿಗೆ ಅಪಾರ ಮಾಡಿದ ಎರಡು ಮುಖಪುಟಗಳು ಇವು. ಅಪಾರನನ್ನು ಹೈದರಾಬಾದ್ ನಿಂದ ಸಂಪರ್ಕಿಸಿ ಹೀಗೆ ಮನೆಯೊಂದರ ಕಥೆ ಹೇಳ್ತಾ ಇದ್ದೀನಿ ಮುಖಪುಟ ಬೇಕು ಅಂದೆ. ಅಪಾರ ತಕ್ಷಣ ತನ್ನ ಆತ್ಮೀಯ ಗೆಳೆಯ ಡಿ ಜಿ ಮಲ್ಲಿಕಾರ್ಜುನ್ ಗೆ ಕರೆ ಮಾಡಿ ಹೀಗೀಗೆ.. ಅಂತ ಹೇಳಿ ಚಿತ್ರ ತೆಗೆಯಲು ಹೇಳಿದರು ಹಾಗೆ ತೆಗೆದ ಚಿತ್ರ ಇಲ್ಲಿ ಮುಖಪುಟವಾಗಿದೆ.
ಆದರೆ ನಾನು ಬರೆದದ್ದು ಒಂದು ಕಾಲದ ಮನೆಯ ಕಥೆಯಲ್ಲ. ಈಗಲೂ ಜೀವಂತವಾಗಿರುವ ಮನೆಯ ಕಥೆ. ಹಾಗಾಗಿ ಮುಚ್ಚಿದ ಬಾಗಿಲಿನ, ಈ ಹಳೆಯ ಮನೆಯನ್ನು ಹಿನ್ನೆಲೆಗೆ ಸರಿಸಿ ಏನು ಮಾಡುವುದು ಎಂಬ ತಲಾಶ್ ನಲ್ಲಿ ತೊಡಗಿದೆವು. ಆಗ ಸಿಕ್ಕಿದ್ದು ಪ ಸ ಕುಮಾರ್. ಅವರಿಗೆ ಅಪಘಾತವಾಗಿ ಬಲಗೈನಲ್ಲಿ ಕೆಲಸ ಮಾಡುವ ಹಾಗಿರಲಿಲ್ಲ. ಕಲಾವಿದನಿಗೆ ಬರೆಯುವ ಕೈಯೇ ಇಲ್ಲವಾದರೆ…? ಪ ಸ ಕುಮಾರ್ ಎದೆಗುಂದಲಿಲ್ಲ. ಎಡಗೈನಲ್ಲಿಯೇ ಬರೆಯಲು ಆರಂಭಿಸಿದರು. ಹಾಗೆ ಬರೆದ ಹಲವು ಚಿತ್ರಗಳಲ್ಲಿ ಇದೂ ಒಂದು.
ಇಲ್ಲಿಯ ಒಂದು ಸೂಕ್ಷ್ಮ ಗಮನಿಸಿದ್ದೀರಾ. ಇಲ್ಲಿ ಎಡಗೈ ಒಂದು ಮನೆಯಾಗಿದೆ. ಆ ಮನೆಯೊಳಗೇ ಸಂಸಾರವಿದೆ. ಪ ಸ ಕುಮಾರ್ ಹೇಗೆ ತನ್ನ ಎಡಗೈ ಇಡೀ ಬದುಕಿಗೆ ಸಂಸಾರಕ್ಕೆ ಆ ದಿನಗಳಲ್ಲಿ ಆಧಾರವಾಯಿತು ಎಂಬುದನ್ನು ಬಿಡಿಸಿಟ್ಟಿದ್ದಾರೆ.
ಈ ಚಿತ್ರ ನನಗೆ ಇಷ್ಟವಾಗಲು ಕಾರಣ ಇಲ್ಲಿ ಮನೆ ಬಾಗಿಲಿದೆ. ಸಂಸಾರವಿದೆ, ಅದು ಜೀವಂತವಿದೆ ಎನ್ನುವುದು . ಇದನ್ನು ಅಪಾರನಿಗೆ ಕಳಿಸಿದೆ. ಪ ಸ ಕುಮಾರ್ ನನ್ನ ಈ ಪುಸ್ತಕಕ್ಕೆ ಹತ್ತು ಹಲವಾರು ಚಿತ್ರ ಬರೆದರು. ಅದೆಲ್ಲವೂ ಒಳಪುಟದಲ್ಲಿದೆ. ಅಷ್ಟೇ ಅಲ್ಲ, ಈ ಪುಸ್ತಕಕ್ಕೆ ಚಿತ್ರ ಬರೆಯಲು ಕುಂಚ ಹಿಡಿದ ಪ ಸ ಕುಮಾರ್ ಪೆನ್ನನ್ನೂ ಹಿಡಿದು ಈ ಪುಸ್ತಕ ಹುಟ್ಟು ಹಾಕಿದ ಭಾವನೆಗಳನ್ನೆಲ್ಲಾ ಹೊರಗಿಟ್ಟರು. ಅದೂ ಈ ಪುಸ್ತಕದಲ್ಲಿದೆ . ಇದು ಒಂದು ರೀತಿಯಲ್ಲಿ ಸವಿ ಸವಿ ನೆನಪು.. ಸಾವಿರ ನೆನಪು..
ಈಗ ಹೇಳಿ ಈ ಮೇಲಿನ ಎರಡು ಮುಖಪುಟದಲ್ಲಿ ಯಾವುದು ಇಷ್ಟವಾಯಿತು..?