ಇದು ನನ್ನ ಎರಡನೆಯ ಕವಿತಾ ಸಂಕಲನ. ನನ್ನನ್ನು ಕಾಡಿದ, ನನ್ನೊಳಗೊಂದು ಹಾಡು ಮೂಡಿದ ಸಂಕಲನ. ಇದಕ್ಕೆ ಈ ಹೆಸರು ಯಾಕೆ ಇಡಬೇಕಾಗಿ ಬಂತೋ ಗೊತ್ತಿಲ್ಲ. ಆದರೆ ನನ್ನೊಳಗೆ ಮೂಡಿದ ಪ್ರಶ್ನೆಗಳೆಲ್ಲಾ ಹೀಗೆ ಎದ್ದು ಬಂದಿವೆ.
ಜಗತ್ತನ್ನು ಒಂದು ನಾಟಕ ರಂಗ ಎಂದು ಬಣ್ಣಿಸಿದ ನಾವು, ನೀವು, ಅವರು, ಇವರು ಎಲ್ಲರನ್ನೂ ಪಾತ್ರಗಳನ್ನಾಗಿಸಿದ ಆ ಶೇಕ್ಸ್ ಪಿಯರ್ ಗಲ್ಲದೆ ಇನ್ನಾರಿಗೆ ಪ್ರಶ್ನೆ ಕೇಳಲು ಸಾಧ್ಯ?. ಶೇಕ್ಸ್ ಪಿಯರ್ ನ ನಾಟಕದಲ್ಲಿ ಏನೇನಿಲ್ಲ?. ಎಷ್ಟೊಂದು ಕಥೆ, ಏನೆಲ್ಲಾ ಕಥೆ. ಹಾಗಾಗಿಯೇ ಇದು 'ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ..'