ಡಂಕೆಲ್ ಪ್ರಸ್ತಾವನೆಗೆ ಭಾರತ ಸಹಿ ಹಾಕುತ್ತದೆ ಎನ್ನುವ ಕಾಲ ಬಂದಾಗ ಬಂದ ಎರಡು ಕೃತಿಗಳು ಇವು. ಮಾಧ್ಯಮ ರಂಗದ ಮೇಲೆ ಡಂಕೆಲ್ ಪ್ರಸ್ತಾವನೆ ಬೀರುವ ಪರಿಣಾಮವೇನು ಎಂದು ಹುಡುಕುತ್ತಾ ಹೊರಟಾಗ ಈ ಕೃತಿಗಳು ಮೂಡಿ ಬಂದವು.
ನವಕರ್ನಾಟಕ ಪಬ್ಲಿಕೇಷನ್ಸ್ ಈ ಕೃತಿಗಳೆರಡನ್ನೂ ಪ್ರಕಟಿಸಿತು. ಆರ್ ಎಸ್ ರಾಜಾರಾಂ ಅವರು ನನ್ನೊಳಗೆ ತುಂಬಿದ ವಿಶ್ವಾಸ ನಾನು ಮಾಧ್ಯಮ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು. ಸ್ಯಾಟಲೈಟ್ ಟಿ ವಿ ಬಗ್ಗೆ ಬರೆದದ್ದನ್ನು ಓದಿದ ರಾಜಾರಾಂ ಪತ್ರಿಕಾ ರಂಗದ ಬಗ್ಗೆಯೂ ನಾನೇ ಬರೆಯಬೇಕೆಂದು ಹಠ ಹಿಡಿದರು.
ಈ ಕೃತಿಗಳು ನನಗೆ ಇನ್ನೂ ಹೆಚ್ಚು ನೆನಪಿರುವುದಕ್ಕೆ ಕಾರಣ ಈ ಎರಡನ್ನೂ ನಾನು ನನ್ನ ಹೆಂಡತಿ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾಗ, ಮಗು ಎತ್ತಿಕೊಂಡು ಆರೈಕೆ ಮಾಡುತ್ತಿದ್ದಾಗ ಬರೆದದ್ದು. ಆ ಮಗುವಿನ ಘಮ ನನ್ನೊಳಗೆ ಈಗಲೂ ಇದೆ.