'ನನ್ನೊಳಗಿನ ಹಾಡು ಕ್ಯೂಬಾ' ಬಂದ ನಂತರ ಅದನ್ನೇ ಆಧರಿಸಿ ಹಲವು ಯೋಜನೆಗಳು ನನ್ನ ತಲೆಯೊಳಗೆ ಮಿನುಗುತ್ತಲೇ ಇತ್ತು. ಒಂದು, ಆ ಪುಸ್ತಕದಲ್ಲಿರುವ ಅದ್ಭುತ ಕಲೆಯನ್ನು ಗ್ರೀಟಿಂಗ್ ಕಾರ್ಡ್ ಆಗಿ ಪರಿವರ್ತಿಸುವುದು. ಎರಡನೆಯದು, ಕ್ಯೂಬಾ ಪರ ಜಗತ್ತಿನಾದ್ಯಂತ ನಡೆಯುತ್ತಿರುವ ಸೌಹಾರ್ದ ಹೋರಾಟಗಳನ್ನು ಪರಿಚಯಿಸುವ್ಯ್ದು. ಹೀಗೆ..
ಕನಸಿಗೇನೂ ಮಿತಿ ಇರಲಿಲ್ಲ. ಆದರೆ ಅದರಲ್ಲಿ ಕೈಗೂಡಿದ್ದು ಕ್ಯೂಬಾ ಗ್ರೀಟಿಂಗ್ ಕಾರ್ಡ್ ಮಾತ್ರ. ಅದೂ ಸಾಕಷ್ಟು ವರ್ಷಗಳ ನಂತರ. ಈ ಮಧ್ಯೆ ನನಗೆ ಗೊತ್ತಿಲ್ಲದಂತೆಯೇ ಇನ್ನೊಂದು ಯೋಜನೆ ಫಲಿಸಿ ಹೋಯ್ತು ಅದು ನನ್ನ ಪುಸ್ತಕವನ್ನು ಮುಖ್ಯವಾಗಿ ಆಧರಿಸಿದ, ಅದರ ದೃಶ್ಯ ಆವೃತ್ತಿ ಎನ್ನಬಹುದಾದ ಪುಸ್ತಕ. ಅದನ್ನು ಹೊರತಂದಿದ್ದು ಕ್ರಿಯಾ ಪ್ರಕಾಶನ. ಎನ್ ಕೆ ವಸಂತರಾಜ್, ಎನ್ ಕೆ ವೇದರಾಜ್ ಅವರ ಮುತುವರ್ಜಿಯಿಂದ ಬಂದ ಪುಸ್ತಕ. ಇದರ ಬೆನ್ನಿಗೆ ನಾನು ಕ್ಯೂಬಾ ಬಗ್ಗೆ ಇತ್ತೇಚೆಗೆ ಬರೆದ ಇನ್ನೊಂದು ಕವಿತೆ ಇದೆ.