G N Mohan
  • Home
  • Latest
  • In CNN
  • My Books
    • Poetry >
      • ಸೋನೆಮಳೆಯ ಸಂಜೆ
      • ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ
    • ನನ್ನೊಳಗಿನ ಹಾಡು ಕ್ಯೂಬಾ >
      • Laurels..
      • The Book
      • Cuba Cover and illustration
      • Cuba in other languages
      • Cuba Cards
      • Book based on my Book
      • Reviews
    • Media Mirchi
    • Door No 142
    • On Media
    • Others
    • Book Markers
  • My Photographs
    • My Photos
    • Programmes I attended
    • In others Camera
    • Gallery -Interviews
  • In Media
  • ಅವಧಿ
  • Contact me Here
  • In 'Samaya'
  • Blog
  • Blog

ಗೋಪಾಲ ವಾಜಪೇಯಿ ಅವರ ಸಾಂಗತ್ಯದಲ್ಲಿ..

Picture
ಇವರು ಗೋಪಾಲ  ವಾಜಪೇಯಿ. ಇವರು ಬರೆದ ನಾಟಕವನ್ನು ನೋಡುತ್ತಾ, ಇವರು ಸಿನೆಮಾಗಳಿಗೆ ಬರೆದ ಭಿನ್ನ ಹಾಡುಗಳನ್ನು ಕಿವಿದುಂಬಿಕೊಂಡು  ಬೆಳೆದವನು ನಾನು. ಗೋಪಾಲ ವಾಜಪೇಯಿ 'ದೊಡ್ಡಪ್ಪ' ಬರೆದಾಗ, 'ಸಂತ್ಯಾಗ ನಿಂತಾನ ಕಬೀರ', 'ಧರ್ಮಪುರಿಯ ಶ್ವೇತ ವೃತ್ತಾಂತ..' ಹೀಗೆ ನಾಟಕಗಳನ್ನು  ಅನುವಾದಿಸುತ್ತಾ ಹೋದಾಗ ಅವರನ್ನು ಬೆರಗಿನಿಂದ ನೋಡಿದವನು ನಾನು. ಅಂತಹ ವಾಜಪೇಯಿಯವರೊಡನೆ ಕೆಲಸ ಮಾಡುವ ಅವಕಾಶ ಕೂಡಿಬಂದಾಗ ನಾನು ಸಂತಸಗೊಂಡಿದ್ದೆ. ಈಟಿವಿ ಚಾನಲ್ ನ ನ್ಯೂಸ್ ವಿಭಾಗದ ಮುಖ್ಯಸ್ಥನಾಗಿ ನಾನು ರಾಮೋಜಿ ಫಿಲಂ ಸಿಟಿಗೆ ಹೋದಾಗ ಅಲ್ಲಿ ಮನರಂಜನಾ ವಿಭಾಗದಲ್ಲಿ ವಾಜಪೇಯಿ ಅವರು ಇದ್ದರು. ಎಷ್ಟು ಸರಳ ಬದುಕಿನ, ಮೆಲು ಮಾತಿನ, ಕಾಳಜಿಯ ಹೃದಯದ ವಾಜಪೇಯಿ ಅವರ ಸನಿಹದಲ್ಲಿದ್ದೆ ಎಂಬುದು ನನಗೆ ಖುಷಿಯ ವಿಷಯವೇ. 

ಅಲ್ಲಿದ್ದಾಗ ನಾನು ಓದಿದ ಪುಸ್ತಕಗಳು ಅವರ ಕೈಗೂ, ಅವರ ಭಂಡಾರದಲ್ಲಿದ್ದ ಪುಸ್ತಕಗಳು ನನಗೂ, ನಾನು ಮಾಡಿದ ಕಾರ್ಯಕ್ರಮಗಳನ್ನು ಮೆಚ್ಚುತ್ತ ಅವರೂ, ಅವರು 'ನಾಗಮಂಡಲ'ಕ್ಕೆ ಬರೆದ ಹಾಡುಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾ ಬದುಕು ಸಾಗಿಸಿದೆವು. 

ಅಂತಹ ವಾಜಪೇಯಿ ಅವರು ಒಮ್ಮೆ ಫೋನ್ ಮಾಡಿ ನನ್ನ ಪುಸ್ತಕವೊಂದು ಮುದ್ರಣವಾಗಬೇಕು ಎಂದರು. ರಂಗಭೂಮಿಯಲ್ಲಿ ಸುದ್ದಿ ಮಾಡಿದ ಭೀಷಂ ಸಹಾನಿ ಅವರ 'ಕಬೀರ ಖಡಾ ಬಜಾರ್ ಮೇ' ನಾಟಕ  'ಸಂತ್ಯಾಗ ನಿಂತ್ಯಾನ ಕಬೀರ' ಆಗಿ ಅನುವಾದಗೊಂಡಿತ್ತು. ನಾಟಕದ ಸ್ಕ್ರಿಪ್ಟ್ ಅನ್ನು ಅವರು ಥೇಟ್ ಆ ಕಬೀರನಂತೆಯೇ ೨೨ ವರ್ಷಗಳ ಕಾಲ ಕೈನಲ್ಲಿ ಹಿಡಿದು ಪ್ರಕಾಶನದ ಸಂತೆಯಲ್ಲಿ ಮಾರ್ಗ ತಿಳಿಯದೆ ನಿಂತಿದ್ದರು. 

ಅದು ಗೊತ್ತಾಗಿ ನಾನೂ ಅವರೂ ಸೇರಿ ನವಕರ್ನಾಟಕವನ್ನು ಸಂಪರ್ಕಿಸಿದೆವು. ಆ ವೇಳೆಗಾಗಲೇ ಟಿ ಎಸ್ ಲೋಹಿತಾಶ್ವ ಅವರು ನಾಟಕವನ್ನು ಅನುವಾದಿಸಿ ಪ್ರಕಟಿಸಿದ್ದರು. ಹಾಗಾಗಿ ನವಕರ್ನಾಟಕ ಅಷ್ಟೇನೂ ಉತ್ಸಾಹ ತೋರಿಸಲಿಲ್ಲ. ನಂತರ ನಾವಿಬ್ಬರೂ ಆ ವೇಳೆಗೆ ಪರಿಚಿತರಾಗಿದ್ದ ಎಂ ಬೈರೇಗೌಡರ ಬೆನ್ನು ಬಿದ್ದೆವು. ಈಗ ಆ ಪುಸ್ತಕವೂ ಅದರೊಂದಿಗೆ ಬ್ರೆಕ್ಟ್ ನ 'ಕಕೇಷಿಯನ್ ಚಾಕ್ ಸರ್ಕಲ್ ' ಆಧರಿಸಿದ 'ಧರ್ಮಪುರಿಯ ಶ್ವೇತ ವೃತ್ತಾಂತ'ವೂ ಪ್ರಕಟವಾಗುತ್ತಿದೆ. 

ಈ ಸಂತಸದ ಘಳಿಗೆ ಇಲ್ಲಿದೆ. ಟಿ ಎಸ್ ನಾಗಾಭರಣ, ಗುಡಿಹಳ್ಳಿ ನಾಗರಾಜು ಇಬ್ಬರೂ ವೇದಿಕೆಯಲ್ಲಿದ್ದರು. ಯಾಕೋ ಗೊತ್ತಿಲ್ಲ್ಲ ಅವರು ನನ್ನನ್ನೂ ಜೊತೆಗೆ ಸೇರಿಸಿಕೊಂಡರು. 


ವಿಶ್ವ ಪುಸ್ತಕ ದಿನಾಚರಣೆಯಲ್ಲಿ 

ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕರ್ನಾಟಕ  ಪ್ರಕಾಶಕರ ಸಂಘ ಜಂಟಿಯಾಗಿ ವಿಶ್ವ ಪುಸ್ತಕ ದಿನಾಚರಣೆಯನ್ನು ಹಮ್ಮಿಕೊಂಡಿತ್ತು. ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕರಡಚ್ಚು ತರಬೇತಿ ಕಮ್ಮಟದಲ್ಲಿ ನಾನು ಆಧುನಿಕ ಮಾಧ್ಯಮದಲ್ಲಿ ಕರಡಚ್ಚು ಕುರಿತು ಮಾತನಾಡಿದೆ.   

'ಥಟ್ ಅಂತ ಹೇಳಿ' ಸ್ಪೆಷಲ್ ಎಪಿಸೋಡ್ ನಲ್ಲಿ 

ದೂರದರ್ಶನದ 'ಚಂದನ'ದಲ್ಲಿ ತುಂಬಾ ಪಾಪ್ಯುಲರ್ ಆದ ಕಾರ್ಯಕ್ರಮ ನಾ ಸೋಮೇಶ್ವರ ಅವರ 'ಥಟ್ ಅಂತ ಹೇಳಿ..'.  ಯುಗಾದಿ ಹಬ್ಬದ ಅನಗವಾಗಿ ನಾ ಸೋಮೇಶ್ವರ ಹಾಗೂ ಕಾರ್ಯಕ್ರಮದ ಮುಖ್ಯಸ್ಥರಾದ ರಘು ಅವರು ವಿಶೇಷ ಥಟ್ ಅಂತ ಹೇಳಿ ರೂಪಿಸಿದರು. ಅದಕ್ಕೆ ಅವರು ನನ್ನನ್ನು ಹಾಗೂ ರಂಗಾಯಣದ ಮೂಲಕ ಜನಪ್ರಿಯಳಾದ ಕಲಾವಿದೆ ಎನ್ ಮಂಗಳಾ ಅವರನ್ನು ಆಹ್ವಾನಿಸಿದರು. 

ತುಂಬಾ ಮಜಾ ಕೊಟ್ಟ ಕಾರ್ಯಕ್ರಮ ಅದು. ಉತ್ತರ ಗೊತ್ತಿಲ್ಲದೇ ಹೋದರೆ ಅಂತ ನರ್ವಸ್ ಆಗಿದ್ದಂತೂ ನಿಜ. ಆದರೆ ಕೊನೆಗೆ ಒಂದು ಮಣ ಬಹುಮಾನದ ಪುಸ್ತಕ ಹೊತ್ತು ಸಂತೋಷದಿಂದ ವಾಪಸ್ ಬಂದೆವು..

ಕೃಷಿಕರ ನಡುವೆ 

ಧಾರವಾಡ baalaa ಬಳಗದಲ್ಲಿ ಜರುಗಿದ ಕಾರ್ಯಕ್ರಮ ಇದು. ಕ್ಯಾಮ್, ದೇಶಪಾಂಡೆ ಪ್ರತಿಷ್ಠಾನ ಹಾಗೂ ಆತ್ಮ ದೀಪ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷಿಕರ ಬಗೆಗಿನ ಪುಸ್ತಕ ಬಿಡುಗಡೆ ಮಾಡಿ ನಾನೂ ಹಾಗೂ ಜಲ ತಜ್ಞ ಶ್ರೀ ಪಡ್ರೆ ಮಾತನಾಡಿದೆವು 
Picture

ಕಲಾಮಂದಿರದಲ್ಲಿ 'ಕವಿಮನ' 

ಕಲಾ ಮಂದಿರದ ಗೌರಿ ದತ್ತು ಫೋನ್ ಮಾಡಿ ಕವಿಗಳೊಂದಿಗೆ ಮುಖಾಮುಖಿಯಾಗುವ ಯೋಚನೆ ಹಂಚಿಕೊಂಡರು. ಅವರಿಗಿದ್ದ ಮುಖ್ಯ ಕಾಳಜಿ ಇಳಿವಯಸ್ಸಿನಲ್ಲಿರುವ ತಮ್ಮ ತಂದೆ ಎ ಎಸ್ ಮೂರ್ತಿ ಅವರು ಉತ್ಸಾಹದಿಂದ ಪುಟಿಯಲು ಒಂದು ದಾರಿ ಹುಡುಕುವುದಾಗಿತ್ತು. ಬನ್ನಿ ನೀವೂ ಕವಿತೆ ಓದಿ, ಮೂರ್ತಿಯವರೂ ಓದುತ್ತಾರೆ ಎಂದರು. 

ಹಾಗೆ ರೂಪು ತಳೆದದ್ದು 'ಕವಿಮನ' ಆ ಸರಣಿಯ ಮೊದಲ ಕಾರ್ಯಕ್ರಮದ ನೋಟ ಇದು. 

ಜೋಗಿ 'ಚಿಟ್ಟೆ ಹೆಜ್ಜೆ ಜಾಡು' 

ಜೋಗಿ ಬರೆದ 'ಚಿಟ್ಟೆ ಹೆಜ್ಜೆ ಜಾಡು' ಹಾಗೂ 'ಜೋಗಿ ಕಥೆಗಳು' ಬಿಡುಗಡೆ ಸಮಾರಂಭದ ನೋಟ ಇದು. ನಾನು, ಹಂಸಲೇಖ, ನಾಗತಿಹಳ್ಳಿ ಚಂದ್ರಶೇಖರ್, ಗೋಪಾಲಕೃಷ್ಣ ಕುಂಟಿನಿ ಸಮಾರಂಭದಲ್ಲಿದ್ದೆವು    
ಅಂಕಿತ ಪುಸ್ತಕದ ಕಾರ್ಯಕ್ರಮ ಬೆಂಗಳೂರಿನ ನಯನ ಸಭಾಂಗಣದಲ್ಲಿ ಜರುಗಿತು. 

ಒಂದು ಸಂತಸದ ಘಳಿಗೆ 

Picture
ಇದೇ ಸಮಾರಂಭದಲ್ಲಿ ನಾನು, ಜೋಗಿ, ನಾಗತಿಹಳ್ಳಿ ಚಂದ್ರಶೇಖರ್, ವಿಶ್ವೇಶ್ವರ ಭಟ್, ಟಿ ಎನ್ ಸೀತಾರಾಂ ಒಂದು ಜೋಕ್ ಹಂಚಿಕೊಳ್ಳುತ್ತಿರುವುದು. 


ಮೂಡಬಿದಿರೆಯ 'ನುಡಿಸಿರಿ'ಯಲ್ಲಿ 

ಮೂಡಬಿದೆರೆಯಲ್ಲಿ ಪ್ರತೀ ವರ್ಷ ಜರುಗುವ 'ನುಡಿಸಿರಿ'ಯಲ್ಲಿ ನಾನೂ, ಜೋಗಿ ಪಾಲ್ಗೊಂಡಿದ್ದೆವು, ನಾನು ಎಲೆಕ್ಟ್ರಾನಿಕ್ ಮಾಧ್ಯಮದ ಬಗ್ಗೆ, ಜೋಗಿ ಮುದ್ರಣ ಮಾಧ್ಯಮದ ಬಗ್ಗೆ ಮಾತನಾಡಿದ್ದು. ಹಂಪನಾ ಅವರು ಸಮ್ಮೇಳನದ ಅಧ್ಯಕ್ಷರು. 

ಪ್ರಕಾಶ್ ಹೆಗಡೆ ಅವರ 'ಹೆಸರೇ ಬೇಡ' ಬಿಡುಗಡೆಯಲ್ಲಿ 

Powered by Create your own unique website with customizable templates.